ARCHIVES
VOL. 3, ISSUE 2 (2017)
ಕನ್ನಡ ಲಾವಣಿ ಸಾಹಿತ್ಯದಲ್ಲಿ ಟಿಪ್ಪುವಿನ ಯುದ್ಧಗಳ ವರ್ಣನೆ
Authors
ಡಾ. ಕಾವ್ಯಶ್ರೀ.ಜಿ.
Abstract
ಸತ್ಯಂ ಶಿವಂ ಸುಂದರಂ ಎಂಬಂತೆ ಸತ್ಯವೇ ಶಿವ ಶಿವನೇ ಸುಂದರ. ಸತ್ಯಕ್ಕೆ ಸಾವಿಲ್ಲ, ಸತ್ಯದಂತೆಯೇ ಸೌಂದರ್ಯ, ಅದಕ್ಕೂ ಸಾವಿಲ್ಲ. ಸತ್ಯ-ಸೌಂದರ್ಯದಂತೆಯೇ ಸಾಹಿತ್ಯ. ಸಾಹಿತ್ಯ ಸಂತೋಷವನ್ನುಂಟು ಮಾಡುವುದರೊಂದಿಗೆ ಸಮಾಜವನ್ನು ಯಥಾವತ್ತಾಗಿ ಬಿಂಬಿಸುವ ಕೆಲಸವನ್ನು ಮಾಡುತ್ತದೆ. ಸಾಹಿತ್ಯವಿಲ್ಲದ ಜೀವನವಿಲ.್ಲ ಸುಂದರವಾಗಿ ರಮಣೀಯವಾದ ಶಬ್ದ ಅರ್ಥಗಳಿಂದ ವಿವರಿಸುವುದೇ ಸಾಹಿತ್ಯ. ಇಂಥ ಸಾಹಿತ್ಯವೇ ಸುಖಕರ. ಜನಪದರ ಬಾಯಿಂದ ಬಾಯಿಗೆ; ಕಿವಿಯಿಂದ ಕಿವಿಗೆ ಹರಿದು ಸಾಗಿ ಬಂದುದೇ ಜನಪದ ಸಾಹಿತ್ಯ. ಇದು ಮೌಖಿಕ. ಅನಕ್ಷಸ್ತರ ಅನುಭವಕ್ಕೆ ಬಂದದ್ದು, ಅವರು ಅನುಭವಿಸಿದ್ದು, ಕಂಡಿದ್ದು ಕೇಳಿದ್ದು ಹೀಗೆ ಎಲ್ಲವನ್ನು ಅವರು ತಮ್ಮದೇ ಆದ ಧಾಟಿಯಲ್ಲಿ ಹಾಡುತ್ತ, ಹೇಳುತ್ತ ಸಾಗಿದ್ದಿದೆ. ವಾಸ್ತವಿಕ ನೆಲೆಗಟ್ಟಿನ ಮೇಲೆ ಯಾವುದೇ ಉತ್ಪ್ರೇಕ್ಷೆಯಿಲ್ಲದೇ ಸರಳ ಸುಂದರವಾಗಿ ಅಭಿವ್ಯಕ್ತವಾಗುವಂಥದ್ದು. ಹಳ್ಳಿಯ ಜನರ ಬಲ ದೌರ್ಬಲ್ಯಗಳೊಂದಿಗೆ ಅವರ ಮುಗ್ಧತೆ, ಸರಳತೆಯೊಂದಿಗೆ ಸತ್ಯವನ್ನು ಅನಾವರಣಗೊಳಿಸುವ ಶಕ್ತಿ ಇವರ ಹಾಡುಗಳಲ್ಲಿದೆ. ಜನಪದ ಹಾಡುಗಳಲ್ಲಿ ಲಾವಣಿ ಒಂದು ಪ್ರಮುಖ ವಿಧ. ವಸ್ತು, ಶೈಲಿ, ತಂತ್ರಗಳಲ್ಲಿ ಅದು ಜಾನಪದೀಯ. ಲಾವಣಿಯು ಯಾವಾಗಲೂ ಒಂದೇ ವಸ್ತುವಿನ ಮೇಲೆ ಕೆಂದ್ರೀಕೃತವಾಗಿರುತ್ತದೆ. ಅದರ ಕಥನಗತಿ ವೇಗವಾಗಿ ಸಂಭಾಷಣೆಗಳ ಮೂಲಕ ಮುಕ್ತಾಯಗೊಳ್ಳುತ್ತದೆ. ಇದು ನಾಟಕೀಯವಾಗಿಯೂ ಕಂಡು ಬರುತ್ತದೆ. ಇಂಥ ಲಾವಣಿಗಳು ಸಾಮೂಹಿಕ ಸೃಷ್ಟಿಯಾದರೂ ಒಬ್ಬ ನಾಯಕನ ನೇತೃತ್ವದಲ್ಲಿ ಉಂಟಾದ ರಚನೆ. ಇದು ತೀರಾ ಪ್ರಾಚೀನದ್ದಲ್ಲ. ಮಧ್ಯಕಾಲೀನ ಕಲಾತ್ಮಕವಾದ ಸಾಹಿತ್ಯ ರೂಪ. ಸಂಗೀತವೂ ಇದರೊಂದಿಗೆ ಮೇಳೈಸಿದೆ.
Download
Pages:99-102
How to cite this article:
ಡಾ. ಕಾವ್ಯಶ್ರೀ.ಜಿ. "ಕನ್ನಡ ಲಾವಣಿ ಸಾಹಿತ್ಯದಲ್ಲಿ ಟಿಪ್ಪುವಿನ ಯುದ್ಧಗಳ ವರ್ಣನೆ". International Journal of Humanities and Social Science Research, Vol 3, Issue 2, 2017, Pages 99-102
Download Author Certificate
Please enter the email address corresponding to this article submission to download your certificate.

